ಸೆಕ್ಸ್ ಎಜುಕೇಶನ್: ನಾಚ್ಕೆ ಪಡೋದೇನಿದೆ?
ಬಳ್ಳಾರಿನಲ್ಲಿ ಟೀಚರ್ಸ್ ಕೆಲವರಿಗೆ ಪೀಕ್ಲಾಟ ಶುರು ಆಗಿದೆ. “ಸೆಕ್ಸ್ ಎಜುಕೇಶನ್ ಶುರು ಮಾಡಿ ಅಂತ ಕೂತಿದರೆ” ಅಂತ ಇವರಿಗೆ ಬೇಜಾರು.
ಒಂದಲ್ಲ ಒಂದು ದಿನ ಗೊತಾಗ್ಲೇ ಬೇಕಾದ ವಿಷಯ ಇದು. ನಂ ಕಾಲದಲ್ಲಂತೂ ಕದ್ದೂ-ಮುಚ್ಚಿ ತಿಳ್ಕೊಂಡ್ವಿ… ಈ ಕಾಲಕ್ಕೆ (ಎಂತೆಂಥ ಮಾಧ್ಯಮಗಳಿವೆ ಈಗ) ಸರಿಯಾಗಿ ತಿಳಿಕೋತಾರೆ ಮಕ್ಕಳು ಅಂದ್ಕೊಂಡರೆ, ಹೇಳ್ಕೊಡೋದಕ್ಕೆ ನಾಚ್ಕೆ ಅಂತೆ ಈ ಟೀಚರ್ಸ್ ಗೆ.
ಅಲ್ಲ, ನಾಚ್ಕೆ ಪಡೋ ಅಂಥದ್ದು ಏನಿದೆ ಅಂತ? ಎಷ್ಟೂ ಅಂತ ಕದ್ದು-ಮುಚ್ಚಿ ‘ಡೆಬೋನೈರ್-ಪ್ಲೇಬಾಯ್’ ನೋಡ್ ಕಲೀತಾರೆ ಮಕ್ಕಳು ಹೇಳಿ? ಈಗ ಎಲ್ಲ ಮನೇಗೆ ಬರೋ ಕಾಲ. ಪೀತ್ಸ, ಬರ್ಗರ್ ಅಲ್ಲದೆ ಡಿ-ಟಿ-ಎಚ್ ಅಂದರೆ Direct to Home ಕೇಬಲ್ ಕೊಡ್ತಾರೆ. ಅಂದಮೇಲೆ ಸರ್ಯಾಗಿ ಸೆಕ್ಸ್ ಎಜುಕೇಶನ್ ಕೊಡ್ಬೇಡ್ವಾ? ಟ್ರೇನಿಂಗ್ ತೊಗೋಳೋದಕ್ಕೆ ಹಿಂಜರೀತಿದಾರಂತೆ ಟೀಚರ್ಸ್, ಏನೇಳೋಣ?
About this entry
You’re currently reading “ಸೆಕ್ಸ್ ಎಜುಕೇಶನ್: ನಾಚ್ಕೆ ಪಡೋದೇನಿದೆ?,” an entry on ತಲೆಹರಟೆ
- Published:
- April 4, 2007 / 8:32 am
- Category:
- Uncategorized
- Tags:



2 Comments
Jump to comment form | comments rss [?] | trackback uri [?]