ರಥ ಎಳೀಬೇಕಾದ್ರೆ, ಮೇಲೂ ನೋಡ್ಬೇಕು

ಮೊನ್ನೆ ಕರಗ ಆಯ್ತಲ್ಲ, ರಥ ನಗರೇಶ್ವರನ ದೇವಸ್ಥನದ ಹತ್ತಿರ ಇರೋ ಹಳೇ ಪೋಸ್ಟ್ ಆಫೀಸ್ ಹತ್ತ್ರ ಹೋಗ್ತಿತ್ತಂತೆ, ಸಡನ್ ಆಗಿ ರಥದ ‘ಟಾಪ್’ ಪಾಪ ಜನರೇಟರ್ ಎತ್ಕೊಂಡ್ ಬರೋ ಹುಡುಗರ ಮೇಲೆ ‘ಧುಡುಂ’ ಅಂತ ಬಿತ್ತಂತೆ. ಮಧ್ಯರಾತ್ರಿ ೩ ಘಂಟೆ ಸಮಯ. ಹುಡುಗರ ಹೆಸರು: ಕೃಷ್ಣ ಮತ್ತು ಸುರೇಶ. ಸಣ್ಣ-ಪುಟ್ಟ ಘಾಯಗಳು ಆಗಿದೆಯಂತೆ. ಆಸ್ಪತ್ರೇಲಿದಾರಂತೆ. ರಥದ ‘ಟಾಪ್’ ಮೇಲಿರೋ ಕೇಬಲ್ ವೈರಿಗೆ ತಗುಲಿ ಬಿತ್ತಂತೆ.

ಮಾರಲ್ ಆಫ್ ದಿ ಸ್ಟೋರಿ: ರಥ ಎಳೀಬೇಕಾದ್ರೆ, ಬರೀ ಕೆಳಗೆ ನೋಡಿದ್ರೆ ಸಾಲ್ದು, ಮೇಲೂ ನೋಡ್ಬೇಕು.


About this entry