ನಾನಲ್ಲ ಅಂಕಲ್…
ಎಕ್ಸಾಂ ಮುಗಿದಿನ್ನು ವನ್ನವರ್ ಕೂಡ ಆಗಿಲ್ಲ, ರೋಡಲ್ಲಿ ಗಲಾಟೆ. ಎಕ್ಸಾಂ ಪ್ಯಾಡೇ ಬ್ಯಾಟು. ನಂ ಕಾಂಪೌಂಡಿಗೆ ಬಾಲ್ ಬಿತ್ತು ಎರಡು ಸಲ. ನಾನು ಬಯ್ಯೋ ಹೊತ್ತಿಗಾಗ್ಲೆ ಓಡ್ಬಿಟಿದ್ವು ಬಾಲ್ ಎತ್ಕೊಂಡು.
ಕಿಟ್ಕಿ ಹಾತ್ರಾನೇ ನಿಂತೆ…ಇನ್ನೊಂದ್ ಸಲ ಬಯ್ಯಕ್ಕೆ ರೆಡಿಯಾಗಿ.
ನಂಗ್ ಬ್ಯಾಟಿಂಗ್ ಕೊಡೋ… ನಾ ವನ್-ಡೌನ್… ಮಂಜ ಜೋಕರ್…ಲೆಗ್-ಸೈಡ್ ನೋ ರನ್ಸ್… ಇವೆ ಕಿರ್ಚಾಟ. ನಿಂತು ನಿಂತು ಸಾಕಾಯ್ತು. ಒಳಗೊಂದು ಲೋಟ ನೀರ್ ಕುಡಿಯಕ್ಕೆ ಹೋದ್ನಪ್ಪ ಅಡಿಗೆ ಮನೆಗೆ…”ಠಳ್” ಅಂಥ ಶಬ್ಧ. ವರಾಂಡಗೆ ಬಂದ್ ನೋಡ್ತೀನಿ… ಗಾಜಿನ್ ಚೂರು… ಹಳಸ್ಲು ಮುಖ ಹಾಕಿರೊ ಫರ್ ಇಲ್ದೆ ಇರೊ ಟೆನ್ನಿಸ್ ಬಾಲು.
ರೋಡಲ್ಲಿ ಮುಂಡೇವು ಒಂದೂ ಇಲ್ಲ.
ವರಾಂಡ ಕ್ಲೀನ್ ಮಾಡಿ ಗಾಜನ್ನ ಹೊರ್ಗಾಕಕ್ಕೆ ಹೋದಾಗ ಮೋರಿ ಹತ್ತ್ರ ಒಂದು ಹುಡ್ಗ ಅಳ್ತಾ ಇದ್ದ. “ಬಾರೊ ಇಲ್ಲಿ, ಯಾಕ್ ಅಳ್ತಿದ್ದಿ” ಅಂದೆ. ಕ್ರಿಕೆಟ್ ಆಡ್ತಿಡ್ವಿ… ಬಾಲ್ ಕಳ್ದೋಯ್ಥು ಅಂದ. “ಯಾರೋ ಹೊಡ್ದಿದ್ದು” ಅಂತ್ ಕೇಳ್ದೆ. “ನಾನಲ್ಲ ಅಂಕಲ್” ಅಂತ ಅಳ್ತಾನೆ ಹೇಳ್ದ. ಘಂಟೆ ಏಳಾಗಿತ್ತು. ಪರೀಕ್ಷೆ ಬೇರೆ ಮುಗಿದಿತ್ತು. ಯಾಕ್ ಪಾಪ ಅಳ್ಸೋದು ಅಂತ ಮನೇಗ್ ಕರ್ಕೊಂಡ್ ಹೋಗಿ “ಇನ್ನೋಂದ್ ಸಲ ಗಾಜ್ ವಡ್ದಾಕದ್ರೆ ಬಾರಿಸ್ಬಿಡ್ತೀನಿ” ಅಂತ ಸುಂನೆ ಗದರಿಸಿ ಬಾಲ್ ಕೊಟ್ಟೆ. ಗೇಟ್ ಹಾಕ್ಕೊಂಡ್ ಹೋಗು ಅಂತಾನೂ ಹೇಳ್ದೆ. “ತಾಂಕ್ಸ್ ಅಂಕಲ್” ಅಂತ ಹೇಳಿ ಮಾಯವಾದ ಹುಡ್ಗ.
ಈ ಘಟನೆ ನದೆದದ್ದು ಎಂಬತ್ತನೆ ಇಸ್ವೀಲಂತೆ. ಯಾರ್ ಹೇಳದ್ರಾ? ಆ ಹುಡ್ಗಂಗೆ ಬಾಲ್ ಕೊಟ್ನಲ್ಲ…ಅವನೆ. ಇವತ್ತು ಮನೇಗ್ ಬಂದು, ಮೇಲಿನ ಘಟನೆನ ವಿವರಿಸಿ…ಮಾತಾಡ್ಕೊಂಡ್ ಹೋದ. ಯಾವ್ದೋ ಅಸಹಿ ಗ್ಲಾಸ್ ಕಂಪನಿನಲ್ಲಿ ಕೆಲ್ಸ ಅಂತೆ.
ಕಾಫಿ ಕುಡ್ದು ‘ಬರ್ತಿನಿ ಅಂಕಲ್’ ಅಂದ. ಬೀಳ್ಕೊಟ್ಟೆ. ಗೇಟ್ ಹಾಕ್ಕೊಂಡ್ ಹೋಗು ಅಂತ ಹೇಳ್ದೆ. ಗೇಟ್ ಹತ್ತ್ರ ಹೋದಾಗ ಕೇಳ್ದೆ: “ಕ್ರಿಕೆಟ್ ಆಡಲ್ಲ ತಾನೆ ಫ್ಯಾಕ್ಟ್ರಿನಲ್ಲಿ” ಅಂತ. ನಕ್ಕ್ದ.
About this entry
You’re currently reading “ನಾನಲ್ಲ ಅಂಕಲ್…,” an entry on ತಲೆಹರಟೆ
- Published:
- April 2, 2007 / 10:42 am
- Category:
- Uncategorized
- Tags:



2 Comments
Jump to comment form | comment rss [?] | trackback uri [?]