ಕೋಳಿ ಕೂಗಿತು…
ಕೋಳಿ ಕೂಗಿತು ಯಾವ ಕೋಳಿ ಬಾತು ಕೋಳಿ ಯಾವ ಬಾತು ಕೇಸರಿ ಬಾತು ಯಾವ ಕೇಸರಿ ತಿನ್ನೊ ಕೇಸರಿ ಯಾವ ತಿನ್ನು ಏಟು ತಿನ್ನು ಯಾವ ಏಟು ಗಾಂಧಿ ಏಟು ಯಾವ ಗಾಂಧಿ ಮಹಾತ್ಮ ಗಾಂಧಿ! ಈ ಸಾಲುಗಳನ್ನ ಚಿಕ್ಕಂದಿನಲ್ಲಿ ಹೇಳ್ತಿದ್ವಿ. ನೆನಪಿದ್ಯಾ ಸ್ನೇಹಿತರೆ? (ನಾಳೆ ಗಾಂಧಿ ಜಯಂತಿ. ಅದಕ್ಕೆ ನೆನಪಾಯ್ತು ಈ ಸಾಲುಗಳು.)
ಅಕ್ಷಯ ತದಿಗೆ: ಹುಚ್ಚೆಬ್ಬಿಸ್ತಿದ್ದಾರೆ ಪೇಪರಲ್ಲಿ
ನಂ ಕಾಲ್ದಲ್ಲಿ ಈ “ಅಕ್ಷಯ ತದಿಗೆ” ಹುಚ್ಚು ಅಷ್ಟೊಂದು ಇರ್ಲಿಲ್ಲಪ್ಪ. ಈ “ಅಕ್ಷಯ ತದಿಗೆ” ಬರೋ ಹತ್ತು ದಿನಕ್ಕೆ ಮುಂಚೆ, ಹತ್ತು ದಿನದ ನಂತರ ಪೇಪರಲ್ಲಿ ಪೇಜ್ ಒಂದ್ರಲ್ಲಿ ಹತ್ತು “ಅಕ್ಷಯ ತದಿಗೆ” ಆಡ್ಸ್! ಇವತ್ತು ರೇಡಿಯೊ ಕೇಳಿದ್ರೆ, ಯಾವ್ದೋ ಪ್ರಶ್ನೆಗೆ ಸರೀ ಉತ್ತರ ಕೊಟ್ಟ್ರೆ ‘ಗೋಳ್ಡ್ ಕಾಯಿನ್’ ಕೊಡ್ತಾರಂತೆ. ಆ ಜೀ ಟಿ.ವಿ ಕನ್ನಡದಲ್ಲಿ ದಿನಾ ಅನು ಪ್ರಭಾಕರ್ ‘ಗೋಳ್ಡ್ ಕಾಯಿನ್’ ಕೊಡ್ತಾನೆ ಇರ್ತಾರೆ…ಸೋ ಡೈಲಿ ಅಲ್ಲಿ ಗೆದ್ದವರಿಗೆ “ಅಕ್ಷಯ ತದಿಗೆ”, ಅಲ್ವಾ?


![Four in a Row [Explored] Four in a Row [Explored]](http://static.flickr.com/7018/6782703137_25b3b3b811_t.jpg)